ಇತಿಹಾಸ

ದೇಶೀಯ ವಿದ್ಯಾಶಾಲಾ ಸಮಿತಿ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಒಂದು ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಇದನ್ನು 1943 ರಲ್ಲಿ ಸ್ಥಾಪಿಸಲಾಯಿತು. ಈ ನಮ್ಮ ಸಂಸ್ಥೆಯು ಏಳು ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಥಾಪಿಸಲ್ಪಟ್ಟಿದ್ದು, ಮಲೆನಾಡು ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸುವ ಉದಾತ್ತ ಉದ್ದೇಶವನ್ನು ಹೊಂದಿದೆ.

Dvs-inaguration

ಡಿ.ವಿ.ಎಸ್. ನ ಮುಖ್ಯ ಕಟ್ಟಡದ ಉದ್ಘಾಟನೆ – ದಿ. ಶ್ರೀ ಶ್ರೀ ಜಯಚಾಮರಾಜ ಒಡೆಯರ್

ಶಿವಮೊಗ್ಗ ಜಿಲ್ಲೆಯು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ,ಚಳವಳಿ, ವಿಜ್ಞಾನ,ಹಾಗೂ ಕ್ರೀಡೆ ಹೀಗೆ ಮುಂತಾದ  ಕ್ಷೇತ್ರಗಳಲ್ಲಿ ಅಪ್ರತಿಮ ಸಾಧಕರ ಕೇಂದ್ರವಾಗಿದೆ. ಕುವೆಂಪು, ಡಾ.ಅನಂತಮೂರ್ತಿ, ಡಾ.ಶಿವರುದ್ರಪ್ಪ, ಶ್ರೀ.ಕೆ.ವಿ.ಸುಬಣ್ಣ, ಶ್ರೀ.ಕಡಿದಾಳ್ ಮಂಜಪ್ಪ, ಗೋಪಾಲಗೌಡ ಮುಂತಾದ ಮಹನೀಯರು ಶಿವಮೊಗ್ಗ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜು ಜೂನ್ 1966 ರಲ್ಲಿ ಪ್ರಾರಂವಾಯಿತು. ಆರಂಭಿಕ ದಿನಗಳಲ್ಲಿ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿದ್ದು, 1988 ರಿಂದ ಕುವೆಂಪು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿದೆ. ಅಂದು ಒಂದು ವಿಜ್ಞಾನ ಸಂಯೋಜನೆ ಮತ್ತು ಕಲಾ ಕೋರ್ಸ್‌ಗಳೊಂದಿಗೆ ಆರಂಭವಾದ ಈ ಸಂಸ್ಥೆಯು ಇಂದು ನಾಲ್ಕು ವಿಭಿನ್ನ ಕೋರ್ಸ್‌ಗಳಾದ B.A., B.Sc., B.C.A ಮತ್ತು B.Com ಗಳನ್ನು ನೀಡುತ್ತಿದೆ

ನಮ್ಮ ಕಾಲೇಜು ಶಿವಮೊಗ್ಗ ನಗರದ ಹೃದಯಭಾಗದಲ್ಲಿದ್ದು, ಉತ್ತಮ ಮೂಲಸೌಕರ್ಯ ಮತ್ತು ಕ್ಯಾಂಪಸ್ ನಿರ್ವಹಣೆ  ಜೊತೆಗೆ ನುರಿತ ಮತ್ತು ಕೌಶಲ್ಯಪೂರ್ಣ ಸಿಬ್ಬಂದಿಗಳನ್ನು ಹೊಂದಿದೆ.  .