ಚಟುವಟಿಕೆಗಳು

ಕ್ರೀಡೆಗಳು ನಮ್ಮ ಕಾಲೇಜಿನ ಕ್ರೀಡಾ ವಿಭಾಗವು ಸ್ಪರ್ಧಾತ್ಮಕ ಕ್ರೀಡಾ ಕ್ಷೇತ್ರದಲ್ಲಿ ಶಾಶ್ವತವಾದ ಹೆಗ್ಗುರುತನ್ನು ಸಾಧಿಸಿದೆ. ಅಂತರ ಕಾಲೇಜು ಮಟ್ಟದ, ವಿಶ್ವವಿದ್ಯಾಲಯ ಮಟ್ಟದ ನಾನಾ ಪಂದ್ಯಾವಳಿಗಳಲ್ಲಿ ಕಾಲೇಜಿನ ತಂಡಗಳು ಭಾಗವಹಿಸಿ ಗುರುತರ ಯಶಸ್ಸು ಪಡೆದಿವೆ.

ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಟೇಬಲ್ ಟೆನ್ನಿಸ್, ವಾಲಿಬಾಲ್‌ಗಳಲ್ಲಿ ಕಾಲೇಜು ಅದ್ಭುತ ಸಾಧಕರನ್ನು ಒಳಗೊಂಡಿದೆ. ಎಲ್ಲಾ ಬಗೆಯ ಕ್ರೀಡಾ ಚಟುವಟಿಕೆಗಳಿಗೆ ಕಾಲೇಜು ತನ್ನದೇ ಕ್ರೀಡಾಂಗಳವನ್ನು ಹೊಂದಿದೆ. ಆಯಾ ಕ್ರೀಡೆಯ ಕೋಚ್‌ಗಳಿಂದ ಉತ್ತಮ ಮಾರ್ಗದರ್ಶನ ಹಾಗೂ ಕಠಿಣ ಅಭ್ಯಾಸಗಳನ್ನು ವಿದ್ಯಾರ್ಥಿಗಳು ನಡೆಸುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳು ಅತ್ಯಾಧುನಿಕ ವ್ಯಾಯಾಮಶಾಲೆಯನ್ನು ಹೊಂದಿದ್ದು ಇತ್ತೀಚನ ವ್ಯಾಯಾಮ ಯಂತ್ರಗಳೂ ಇಲ್ಲಿವೆ. ಕಾಲೇಜಿನ ತಳಮಹಡಿಯಲ್ಲಿ ಪ್ರತ್ಯೇಕ ಮೂಲಸೌಕರ್ಯವನ್ನು ಕಲ್ಪಿಸಿ ಒಳಾಂಗಣ ಕ್ರೀಡೆಗಳಾದ ಕೇರಂ, ಚೆಸ್, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್‌ಗಳಿಗೆ ಆಡಿಟೋರಿಯಂ ನಿರ್ಮಿಸಲಾಗಿದೆ.

ಕಾಲೇಜು ಅನೇಕ ರಾಷ್ಟ್ರ ಹಾಗೂ ಅಂತರರಾಷ್ಟ್ರ ಮಟ್ಟದ ಸಾಧನೆಗೈದ ಕ್ರೀಡಾಪಟುಗಳನ್ನು ತಯಾರಿಸಿದೆ. ಇಂತಹ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಧನ ಹಾಗೂ ವಿದ್ಯಾರ್ಥಿ ವೇತನ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತದೆ. ಹಲವು ಕ್ರೀಡಾಪಟುಗಳಿಗೆ ಅವರು ಮಾಡಿದ ಸಾಧನೆಗೆ ಮೆಚ್ಚುಗೆ ಸೂಚಿಸಿ ಅವರ ಬೋಧನಾ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ.

ಕೆಲವು ವಿದ್ಯಾರ್ಥಿಗಳು ಹಲವು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಧನ ಸಹಾಯ ಒದಗಿಸಲಾಗಿದೆ. ಇದರಿಂದ ಅವರಿಗೆ ಪ್ರೇರಣೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಕ್ರೀಡಾ ವಿಭಾಗವು ವಾರ್ಷಿಕ ಕ್ರೀಡಾಕೂಡವನ್ನು ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷವೂ ನಡೆಸುತ್ತದೆ.

ಕಾಲೇಜು ನಗರದ ಹೃದಯಭಾಗದಲ್ಲಿರುವುದರಿಂದ ನಗರದ ಸ್ಟೇಡಿಯಂ ಕಾಲೇಜಿಗೆ ಸಮೀಪದಲ್ಲಿದೆ. ಜಿಲ್ಲಾ ಕ್ರೀಡಾಂಗಣವು ಕ್ರೀಡೆಗಳಿಗೆ ಬೇಕಾದ ಸಕಲ ಸೌಲಭ್ಯಗಳನ್ನೂ ಒಳಗೊಂಡಿದೆ. ಕ್ರೀಡಾ ಚಟುವಟಿಕಗಳನ್ನು ಪ್ರೋತ್ಸಾಹಿಸುವಲ್ಲಿ ನಾವೆಂದೂ ಹಿಂದೆ ಬೀಳುವುದಿಲ್ಲ.

ಶ್ರೀ ಎಚ್.ಜಿ. ಹರೀಶ್ ಅವರು ಅಮೋಘ ಸಾಧನೆ ಮಾಡಿದರಲ್ಲದೇ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ಅಖಿಲ ಭಾರತ ಚಾಂಪಿಯನ್ ಆಗುವ ಮೂಲಕ ನಮ್ಮ ಕಾಲೇಜಿನಲ್ಲಿ ಇತಿಹಾಸವನ್ನೇ ನಿರ್ಮಿಸಿದ್ದಾರೆ.

ಕುಮಾರಿ ಶಿಲ್ಪಾ ಎಸ್ ಅವರು ರಾಷ್ಟ್ರ ಮಟ್ಟದ ಖೋಖೋ ಕ್ರೀಡಾ ಕೂಟದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಶೇಷ ಸಾಧನೆಗಳು :

ಕ್ರ.ಸಂ

ಹೆಸರು

ಅಮೋಘ ಸಾಧನೆಗಳು
1 Harish S.G.,III Year B.A. 4th Place in 1500 Mts – 67th All India Inter University Athletic Championships 2007 – held at Bangalore University.
2 Sudheer B.G.III Year B.A. 4th Place in Half Marathon – 67th All India Inter University Athletic Championships 2007 – held at Bangalore University.
2nd Place  – Karnataka State Cross country Championship – 2007.

 

ವಿಶೇಷ ಸಾಧನೆಗಳು 2007-08

ವಿಶೇಷ ಸಾಧನೆಗಳು 2008-09

ವಿಶೇಷ ಸಾಧನೆಗಳು 2009-10

ವಿಶೇಷ ಸಾಧನೆಗಳು 2010-11

ವಿಶೇಷ ಸಾಧನೆಗಳು 2011-12

ವಿಶೇಷ ಸಾಧನೆಗಳು 2012-13

 ವಿಶೇಷ ಸಾಧನೆಗಳು 2013-14