
ಮಲೆನಾಡು ಸೀಮೆಯ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ದೇಶೀಯ ವಿದ್ಯಾ ಶಾಲಾ ಸಮಿತಿ (ರಿ.), ಇದರ ಅಂಗ ಸಂಸ್ಥೆಯಾದ ಡಿ.ವಿ.ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ನನಗೆ ಸಂತಸದ ವಿಷಯ. ಶಿವಮೊಗ್ಗ ನಗರದಲ್ಲಿ ಉತ್ತಮ ಸೌಕರ್ಯವುಳ್ಳ ಈ ನಮ್ಮ ಕಾಲೇಜಿನಲ್ಲಿ ಬಿ.ಎ, ಬಿ.ಎಸ್ಸಿ, ಬಿ.ಸಿ.ಎ ಮತ್ತು ಬಿ.ಕಾಂ ಪದವಿಗಳಿದ್ದು, ಉತ್ತಮ ನುರಿತ, ಅನುಭವವುಳ್ಳ ಪ್ರಾಧ್ಯಾಪಕರಿದ್ದಾರೆ. ಇವರೆಲ್ಲ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಆಯ್ಕೆಯ ವಿಷಯಗಳಲ್ಲಿ ಬಹುತೇಕರು ಉನ್ನತ ಮಟ್ಟದ ಸಾಧನೆಗಳನ್ನು ಮಾಡಿದ್ದಾರೆ. ಈ ಸಂಸ್ಥೆಯ ಬುನಾದಿಯನ್ನು ಹಾಕಿದ್ದು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಮಾಜಿಕ ಬದ್ಧತೆಯುಳ್ಳ ಶಿಕ್ಷಕ ಸಮುದಾಯವಾಗಿದೆ.
ʼಶಿಕ್ಷಣ-ಶಿಕ್ಷಕ ಕಾಣುವ ಕನಸುಗಳು ಪ್ರಬುದ್ಧ ಭಾರತದ ಬೌದ್ಧಿಕ ಶಿಸ್ತುಗಳನ್ನು ಕಟ್ಟಿಕೊಳ್ಳುವುದುʼ. ಹಾಗೆಯೇ ಸಾಕಾರಗೊಂಡು ಕರ್ನಾಟಕದ ಕೇಂದ್ರ ಸ್ಥಾನದಲ್ಲಿನ ಈ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ಭಾರತದ ಗರಿ ಮೂಡಿಸುವ ಕೆಲಸವನ್ನು ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಬಾಹ್ಯಾಕಾಶ, ಕ್ರೀಡೆ, ಸಮಾಜ ಸೇವೆಗಳಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸರ್ಕಾರದ ಅತ್ಯುನ್ನತ ಸ್ಥಾನಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ʼಶಿಕ್ಷಣದ ಅವಕಾಶದಿಂದ ಶಿಕ್ಷಣದ ಸಮಾನತೆʼಯು ಸಾಧ್ಯ ಎಂಬ ಆಶಯದಲ್ಲಿರುವ ಈ ಸಂಸ್ಥೆಗೆ ರಾಜ್ಯದ ಬಹುತೇಕ ನಗರಗಳಿಂದ ವಿದ್ಯಾರ್ಥಿಗಳು ಶೈಕ್ಷಣಿಕ ದಾಖಲಾತಿಯನ್ನು ಬಯಸಿ ಬರುತ್ತಾರೆ. ಸುಮಾರು 58 ವಸಂತಗಳನ್ನು ಪೂರೈಸಿದ ಈ ಕಾಲೇಜಿಗೆ ಪ್ರವೇಶ ಪಡೆಯುವುದೆಂದರೆ, ಅದೊಂದು ಅದ್ಭುತ ಅವಕಾಶ ಎಂಬ ಭಾವನೆಯು ಕಾಪಿಡುತ್ತಲೇ ವಿದ್ಯಾರ್ಥಿಗಳು ಪ್ರಗತಿಯ ಹೆಗ್ಗುರುತಾಗಿ ಗುರುತಿಸಿಕೊಳ್ಳುತ್ತಾರೆ. ಅನೇಕರು ಸಾಂಸ್ಕೃತಿಕ ರಾಯಭಾರಿಗಳಾಗಿ ಶೋಭಿಸುತ್ತಿದ್ದಾರೆ. ಅಂತೆಯೇ, ಪ್ರಸ್ತುತ ಕಾಲಕ್ಕೆ ಬೇಕಾದ ಎಲ್ಲಾ ವಿಭಾಗಗಳಿಗೆ ಬೇಕಾದ ನೂತನ ಪ್ರಯೋಗಾಲಯ, ಗ್ರಂಥಾಲಯ, ಸಭಾಂಗಣಗಳಿವೆ. ಕಾಲೇಜಿನ ಉತ್ತಮ ಕಾರ್ಯನಿರ್ವಹಣೆಗೆ ಇರುವ IQAC, ಪಠ್ಯೇತರ ಚಟುವಟಿಕೆಗಳಿಗೆ ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ್ & ರೇಂಜರ್ಸ್, ರೆಡ್ ಕ್ರಾಸ್, ಮತ್ತು ಮಹಿಳಾ ಸಬಲೀಕರಣ ಘಟಕ ಇನ್ನು ಮುಂತಾದವುಗಳು ವಿದ್ಯಾರ್ಥಿಗಳ ಸಮಾಜಮುಖಿ ಆಶೋತ್ತರಗಳಿಗೆ ಸ್ಪಂದಿಸುತ್ತವೆ.
ಇಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಲ್ಲರು. ಅವರಿಗೆ ಶಕ್ತಿ ಸಾಮರ್ಥ್ಯಗಳು ಇಲ್ಲಿನ ಶೈಕ್ಷಣಿಕ ವಾತಾವರಣವು ನೀಡುತ್ತದೆ. ನೀವು ನಿಮ್ಮ ಮಕ್ಕಳ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಕಾಲೇಜಿಗೆ ಭೇಟಿ ನೀಡಿ, ʼಡಿ.ವಿ.ಎಸ್ ನಮ್ಮ ಕಾಲೇಜು ʼಎಂಬ ಹೆಮ್ಮೆ ನಿಮಗೂ ಬರುವುದು.
ವಂದನೆಗಳು
ಸರ್. ಎಂ.ವಿ.ರಸ್ತೆ. ಬಸವೇಶ್ವರ ವೃತ್ತ,
ಶಿವಮೊಗ್ಗ-577 201.

