ವಿದ್ಯಾರ್ಥಿಗಳಿಗೆ ಪೂರಕವಾದ ಉತ್ತಮ ಶೈಕ್ಷಣಿಕ ವಾತಾವರಣವು ಇಲ್ಲಿದ್ದು, ಸಾವಿರಾರು ವಿದ್ಯಾರ್ಥಿಗಳು ತಮ್ಮ ಜ್ಞಾನ ದಾಹವನ್ನುಇಲ್ಲಿ ಈಡೇರಿಸಿಕೊಂಡಿದ್ದಾರೆ. ಪ್ರಸ್ತುತ ಆಧುನಿಕ ಶಿಕ್ಷಣದ ವೈಖರಿಗೆ ತಕ್ಕಂತೆ ಕಾಲೇಜು ತನ್ನ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ನಮ್ಮಲ್ಲಿ ಡಿಜಿಟಲ್ ಗ್ರಂಥಾಲಯ, ಅತ್ಯುತ್ತಮ ಲ್ಯಾಬ್, ಸಭಾಂಗಣ, ಡಿಜಿಟಲ್ ಬೋರ್ಡ್, ಹೊಸ ತರಗತಿಯ ಕೊಠಡಿಗಳು ಮತ್ತು ಕಂಪ್ಯೂಟರ್ ಲ್ಯಾಬ್, ಪ್ರಯೋಗಾಲಯಗಳಿವೆ. ಇವು ನಮ್ಮಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ಉಪಯುಕ್ತಗೊಳ್ಳುತ್ತಿವೆ.
ನಮ್ಮ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಇಲ್ಲಿ ನಿರಂತರವಾಗಿ ನಡೆಯುತ್ತವೆ. ಹಾಗೆಯೇ ನ್ಯಾಕ್ ಸಂಬಂಧಿತ ಕಾರ್ಯಾಗಾರ, ಶೈಕ್ಷಣಿಕ ಪಠ್ಯಕೇಂದ್ರಿತ ಕಾರ್ಯಾಗಾರ ಮತ್ತು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ವಿಷಯ ಬದ್ಧರಾಜ್ಯ, ರಾಷ್ಟ್ರಮಟ್ಟ ಮತ್ತು ಅಂತರ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳನ್ನು ನಾವು ನಡೆಸುತ್ತಿದ್ದೇವೆ. ಈ ನಮ್ಮಕಾಲೇಜಿನಲ್ಲಿ ರಾಷ್ಟ್ರದ ಅತ್ಯುನ್ನತ ಸಂಪನ್ಮೂಲ ವ್ಯಕ್ತಿಗಳು ಇಲ್ಲಿ ಉಪನ್ಯಾಸವನ್ನು ನೀಡಿದ್ದಾರೆ ಎಂಬುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ನಮ್ಮಲ್ಲಿ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅವಕಾಶವಾಗುವಂತೆ ಪ್ರತಿಷ್ಠಿತ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ನೇಮಕಾತಿಯನ್ನು ಒದಗಿಸಿಲಾಗುತ್ತಿದೆ. ಆಸ್ಟ್ರೀಮ್, ವಿಪ್ರೋ, ಇನ್ಫೋಸಿಸ್, ಟಿ.ಸಿ.ಎಸ್, ಗ್ಯಾಲಘರ್, ಇತರೆ ಕಂಪನಿಗಳಿಗೆ ನಮ್ಮ ಕಾಲೇಜಿನಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ.
ನಮ್ಮ ಡಿ.ವಿ.ಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಉತ್ತಮ ಶೈಕ್ಷಣಿಕ ಪ್ರಗತಿಗೆ ಬದ್ಧವಾಗಿದ್ದು,ಪ್ರಬುದ್ಧ ಭಾರತದ ಸಂಪನ್ಮೂಲಗಳಾದ ವಿದ್ಯಾರ್ಥಿಗಳನ್ನು ನೀಡುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಕರು, ಸಾಮಾಜಿಕ ಬದ್ಧತೆಯುಳ್ಳ ಚಿಂತಕರಿಂದ 1943ರಲ್ಲಿ ಈ ಸಂಸ್ಥೆಯು ಆರಂಭಗೊಂಡಿದೆ. ಈ ಮೊದಲ ವರ್ಷದ ಪ್ರಾಥಮಿಕ ಶಾಲೆ ಆರಂಭಗೊಂಡಾಗ ಇದ್ದಂತಹ ವಿದ್ಯಾರ್ಥಿಗಳ ಸಂಖ್ಯೆ ಕೇವಲ 07. ಇಂದು ದೇಶೀಯ ವಿದ್ಯಾ ಶಾಲಾ ಸಮಿತಿ (ರಿ.),ಯು ಬೃಹತ್ ಆಗಿ ಬೆಳೆದಿದೆ. ಪ್ರಾಥಮಿಕ ಪ್ರೌಢ. ಪಿಯುಸಿ (Independent & Composite), ಪಾಲಿಟೆಕ್ನಿಕ್ ಮತ್ತು ಪದವಿ (ಬಿ.ಎ,ಬಿ.ಎಸ್ಸಿ, ಬಿ.ಸಿ.ಎ, ಬಿ.ಕಾಂ) ಶಿಕ್ಷಣವು ಇಲ್ಲಿ ಲಭ್ಯವಿದೆ. ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರವೂ ಇಲ್ಲಿದೆ. ʼಡಿ.ವಿ.ಎಸ್ ಗತವೈಭವಕಾಲʼಎಂಬ ಮಾತುಗಳು ನಮಗೆ ಹೆಮ್ಮೆಯನ್ನು ಮೂಡಿಸುತ್ತದೆ.
ಹಾಗೆಯೇ,ಇಂದು ಕಾಲಕ್ಕೆ ತಕ್ಕ ಹಾಗೆ ಹೊಸ ತಂತ್ರಜ್ಞಾನ, ವೈಜ್ಞಾನಿಕ ಪ್ರಯೋಗಾಲಯ, ಸಂಶೋಧನಾ ಕಾರ್ಯಚಟುವಟಿಕೆಗಳಿಗೆ ಪೂರಕ ವ್ಯವಸ್ಥೆಗಳಿವೆ. ಈ ನೂತನ ಶೈಕ್ಷಣಿಕ ವರ್ಷಕ್ಕೆ ಸುಸಜ್ಜಿತ ನವೀನ ಕಟ್ಟಡದೊಂದಿಗೆ ಹೊಸತನಕ್ಕೆ ಇನ್ನಷ್ಟು ಸಜ್ಜಾಗಿ ನಿಂತಿದೆ.ಈ ಹೊಸಬದಲಾವಣೆಗಳುʼಡಿ.ವಿ.ಎಸ್ ಹೊಸತನದ ಆಶೋತ್ತರʼ ಎಂಬ ಭಾವನೆಯೊಂದಿಗೆ ಭವಿಷ್ಯದ ಉಜ್ವಲತೆಯನ್ನು ಪ್ರಜ್ವಲಿಸುತ್ತದೆ. ʼಹಳೆಬೇರು, ಹೊಸಚಿಗುರು ಕೂಡಿರಲು ಮರಸೊಗಸುʼ ಎಂಬಂತೆ ಇಂದು ಡಿ.ವಿ.ಎಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಆಕರ್ಷಣೆಯ ಭಾಗವಾಗಿ ತೆರೆದುಕೊಂಡಿದೆ.
ನಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳಿಗೆ PF/ESI ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅವರ ವೈಯಕ್ತಿಕ ಬದುಕಿಗೆ ಸಹಕಾರವಾಗುವಂತೆ ಸಂಸ್ಥೆಯಿಂದ ಹಲವು ಯೋಜನೆಗಳನ್ನು ನಿರ್ವಹಿಸಲಾಗುತ್ತಿದೆ. ನಮ್ಮಸಂಸ್ಥೆಯ ಉದ್ಯೋಗಿಗಳಿಗೆ, ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಉದ್ಯೋಗಕ್ಕೆಅವಕಾಶ ಮತ್ತು ಅವರ ಜೀವನಕ್ಕೆ ಬೇಕಾದ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಮನೆಗಳ ನಿರ್ಮಾಣಮಾಡಿಕೊಡುವ ಮಹತ್ತರ ಯೋಜನೆಗಳು ನಮ್ಮ ಮುಂದಿದೆ. ಇಲ್ಲಿ ಓದಿ ಸಮಾಜದಲ್ಲಿ ಹೆಗ್ಗಳಿಕೆಯಿಂದ ಬಾಳುತ್ತಿರುವ ನಮ್ಮ ಡಿ.ವಿ.ಎಸ್ ಹಿರಿಯ ವಿದ್ಯಾರ್ಥಿಗಳ ಸಹಕಾರವು ನಮ್ಮೊಂದಿಗಿದೆ. ಸುಮಾರು 83ವರ್ಷಗಳ ಸುದೀರ್ಘವಾದ ಡಿ.ವಿ.ಎಸ್ ಸಂಸ್ಥೆಯೊಂದಿಗೆ ಒಡನಾಟವು ಬಹುತೇಕ ನಮ್ಮದೇ ಆದ ಸಂಬಂಧವನ್ನು ಹೊಂದಿದ್ದು, ʼಡಿ.ವಿ.ಎಸ್ ಕುಟುಂಬʼಎಂಬ ಭಾವನಾತ್ಮಕತೆಯೂ ನಮಗಿದೆ-ನಿಮಗೂ ಮೂಡುತ್ತದೆ….
ಹೊಸ ಆಶಯದೊಂದಿಗೆ
ಶ್ರೀಕೆಎನ್ ರುದ್ರಪ್ಪಕೊಳಲೆ ಶ್ರೀಎಸ್ ರಾಜಶೇಖರ್
ಅಧ್ಯಕ್ಷರು ಕಾರ್ಯದರ್ಶಿ

