ಅಧ್ಯಕ್ಷರು/ಕಾರ್ಯದರ್ಶಿಗಳ ಸಂದೇಶ

 ಶ್ರೀ ಕೆ ಬಸಪ್ಪ ಗೌಡ

ಅಧ್ಯಕ್ಷರು

ಶ್ರೀ ಎಸ್ ರಾಜಶೇಖರ್

ಕಾರ್ಯದರ್ಶಿಗಳು

“ಉತ್ತಮವಾಗಿ ಆರಂಭಿಸಿದರೆ ಅರ್ಧ ಕೆಲಸ ಮಾಡಿ ಮುಗಿಸಿದಂತೆ” ಎಂಬ ಮಾತು ರಾಷ್ಟ್ರೀಯವಾದಿ ಸ್ವಾತಂತ್ರ್ಯ ಹೋರಾಟಗಾರರು ಆರಂಭಿಸಿದ್ದ ದೇಶೀಯ ವಿದ್ಯಾ ಶಾಲಾ ಸಂಸ್ಥೆಯ ಆರಂಭಕ್ಕೆ ಸೂಕ್ತವಾಗಿ ಅನ್ವಯವಾಗುತ್ತದೆ. ಗಾಂಧೀಜಿಯವರ ತತ್ವಗಳಿಂದ ಪ್ರಭಾವಿತರಾಗಿ, ಸಂಸ್ಥೆಯ ಸ್ಥಾಪಕರೂ ಗೌರವ ಶಿಕ್ಷಕರೂ ಆಗಿದ್ದವರು ಹಾಗೂ ಮೊದಲ ಕಾರ್ಯಕಾರಿ ಸಮಿತಿಯ ಸದಸ್ಯರು, ಮಲೆನಾಡು ಪ್ರದೇಶದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ಸಂಸ್ಥೆಯನ್ನು ಒಂದು ಚಿಮ್ಮುಹಲಗೆಯಾಗಿಸುವ ಕನಸು ಕಂಡಿದ್ದರು. 1943ರಲ್ಲಿ ಕೇವಲ ಒಂದು ಪ್ರಾಥಮಿಕ ಶಾಲೆಯ ಮೂಲಕ 7 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡಿದ್ದ ದೇಶೀಯ ವಿದ್ಯಾ ಶಾಲೆಯು ಇಂದು 6000 ವಿದ್ಯಾರ್ಥಿಗಳಿರುವ ಒಂದು ಸಂಸ್ಥೆಯಾಗಿದೆ. ಇಂದು ಇದರಡಿಯಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆ, 2 ಪ್ರೌಢ ಶಾಲೆಗಳು, 2 ಪ್ರಥಮ ದರ್ಜೆ ಕಾಲೇಜುಗಳು, ಒಂದು ಪಾಲಿಟೆಕ್ನಿಕ್ ಕಾಲೇಜು, ಒಂದು ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದ ಕೇಂದ್ರ, ಕರ್ನಾಟಕ ರಾಜ್ಯ ಮುಕ್ತ ವಿದ್ಯಾಲಯ ಕೇಂದ್ರ ಹಾಗೂ ವಿಶೇಷ ತರಬೇತಿ ಸಂಸ್ಥೆಗಳನ್ನು ತನ್ನ ಬಳಗದಲ್ಲಿ ಸೇರಿಸಿಕೊಂಡಿದೆ. ಪಂಡಿತಾ: ಸಮದರ್ಶಿನಃ ಎಂಬ ಅತ್ಯಂತ ಸೂಕ್ತವಾದ ಧ್ಯೇಯವಾಕ್ಯವು ದೇಶೀಯ ವಿದ್ಯಾ ಶಾಲೆಯು ಜಾತಿ, ವರ್ಣ, ವರ್ಗಗಳನ್ನು ಮೀರಿದ್ದೆಂಬುದನ್ನು ಒತ್ತಿ ಹೇಳುತ್ತದೆ. ಡಿವಿಎಸ್‌ನ ಹಳೆಯ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಂಸ್ಥೆಯ ಪರಿಮಳವನ್ನು ಎಲ್ಲಡೆ ಪಸರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಕೋರ್ಸ್ ಶುಲ್ಕ:

ಡಿವಿಎಸ್ ಆಡಳಿತ ಮಂಡಳಿಯ ಸಂಸ್ಥೆಗಳ ಪೈಕಿ ಕೆಲವು ಅಂಗ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯುತ್ತಿದ್ದರೆ ಇನ್ನು ಕೆಲವು ಅನುದಾನ ರಹಿತವಾಗಿ ನಡೆಯುತ್ತಿವೆ. ಆಡಳಿತ ಮಂಡಳಿಯು ಶಿಕ್ಷಕರಿಗೆ ವೇತನ ನೀಡುವ, ಉದ್ಯೋಗಿಗಳ ಪಿಎಫ್/ಇಎಸ್‌ಐ ಸೌಲಭ್ಯಗಳ ಪಾಲು ಭರಿಸುವ ಮತ್ತು ನಿರ್ವಹಣಾ ವೆಚ್ಚ ಭರಿಸುವ ಹೊರೆಯನ್ನು ಹೊರಬೇಕಿರುತ್ತದೆ. ಹೀಗಾಗಿ ಅನುದಾನಿತ ಹಾಗೂ ಅನುದಾನ ರಹಿತ ಘಟಕಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಶುಲ್ಕ ಹೆಚ್ಚಳವನ್ನು ತಾಳಿಕೊಳ್ಳಲು ಪೋಷಕ ವೃಂದಕ್ಕೆ ವಿನಂತಿಸಲಾಗಿದೆ. ಈ ದೃಷ್ಟಿಯಿಂದ ಸಾರ್ವಜನಿಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು, ಉದಾರ ಮನಸ್ಸಿನ ದಾನಿಗಳು ಮತ್ತು ಎಲ್ಲಾ ಹಿತೈಷಿಗಳಲ್ಲಿ ಸಂಸ್ಥೆಯ ಶಿಕ್ಷಣ ನೀಡುವ ಸದುದ್ದೇಶವನ್ನು ಬೆಂಬಲಿಸಲು, ಜೊತೆಯಾಗಿ ನಿಲ್ಲಲು ಆಡಳಿತ ಮಂಡಳಿಯು ವಿನಂತಿಸಿಕೊಳ್ಳುತ್ತದೆ. ದೇಶೀಯ ವಿದ್ಯಾ ಶಾಲೆಯ ಎಲ್ಲಾ ಶೈಕ್ಷಣಿಕ ಪ್ರಯತ್ನಗಳಿಗೆ ವಿಶಾಲ ಮನಸ್ಸಿನಿಂದ ಸಹಾಯ ಹಸ್ತ ಚಾಚುವಂತೆ ನಾವು ಎಲ್ಲರಲ್ಲಿ ಕೋರುತ್ತೇವೆ.

ಶ್ರೀ ಕೆ ಬಸಪ್ಪ ಗೌಡ

ಅಧ್ಯಕ್ಷರು
ದೇಶೀಯ ವಿದ್ಯಾ ಶಾಲಾ ಸಮಿತಿ (ರಿ)
ಶಿವಮೊಗ್ಗ

ಶ್ರೀ ಎಸ್ ರಾಜಶೇಖರ್

ಕಾರ್ಯದರ್ಶಿಗಳು
ದೇಶೀಯ ವಿದ್ಯಾ ಶಾಲಾ ಸಮಿತಿ (ರಿ)
ಶಿವಮೊಗ್ಗ