ಗ್ರಂಥಾಲಯ

ಕಾಲೇಜಿನ ಗ್ರಂಥಾಲಯದಲ್ಲಿ 42,೦೦೦ ಪುಸ್ತಕಗಳ ಸಂಗ್ರಹವಿದ್ದು ಪದವಿ ವಿದ್ಯಾರ್ಥಿಗಳ ಪಠ್ಯಪೂರಕ ಅಗತ್ಯಗಳನ್ನು ಈಡೇರಿಸಲು ಅನುಕೂಲಕರವಾಗಿದೆ. ನಮ್ಮ ಕಾಲೇಜಿನಲ್ಲಿ ಇರುವ ಗ್ರಂಥಾಲಯವು ಎಲ್ಲಾ ಆಧುನಿಕ ಸೌಲಭ್ಯವುಳ್ಳ ಅತ್ಯಂತ ಚೆನ್ನಾಗಿರುವ ಗ್ರಂಥಾಲಯವಾಗಿದೆ. ಉತ್ತಮವಾಗಿ ವರ್ಗೀಕರಿಸಿದ ಹಾಗೂ ವ್ಯಾಪಕವಾದ ಪುಸ್ತಕ ಸಂಗ್ರಹವನ್ನು ಅದು ಒಳಗೊಂಡಿದೆ.

ಗ್ರಂಥಾಲಯದಲ್ಲಿರುವ ಎಲ್ಲಾ ಪುಸ್ತಕಗಳ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಲಾಗಿದೆ.  ಕಾಲೇಜಿನ ವಾಚನಾಲಯವನ್ನು ನಿಶಬ್ದವಾಗಿ  ಓದುವುದಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು. ಇಲ್ಲಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತ/ತೆಯರೊಂದಿಗೆ ಹರಟೆ ಹೊಡೆಯಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಗ್ರಂಥಾಲಯದೊಳಗೆ ಪ್ರವೇಶ ಪಡೆಯಲು ತಮ್ಮ ಗುರುತಿನ ಚೀಟಿಯನ್ನು ಲೈಬ್ರರಿ ಕೌಂಟರ್‌ನಲ್ಲಿ ಸಲ್ಲಿಸಬೇಕು. ಗ್ರಂಥಾಲಯವು ವಿದ್ಯಾರ್ಥಿಗಳಿಗೆ, ಬೋಧಕ ವರ್ಗದವರಿಗೆ ಮುಕ್ತವಾಗಿದೆ. ವಿದ್ಯಾರ್ಥಿಗಳು ಅಂತರ್ಜಾಲ ಸೌಲಭ್ಯವನ್ನೂ ಇಲ್ಲಿ ಪಡೆಯಬಹುದು.

ಕೆಲಸದ ವೇಳೆ

ತರಗತಿ ನಡೆಯುವ ದಿನಗಳಲ್ಲಿ: ಬೆಳಿಗ್ಗೆ 9-00 ರಿಂದ ಸಂಜೆ 5-00 ಗಂಟೆ

ಗ್ರಂಥಾಲಯದ ಸಿಬ್ಬಂದಿ

ಶ್ರೀಮತಿ ಎಸ್.ವಿ. ಉಷಮಾಣಿ

Library Assistant

ಶ್ರೀಮತಿ ಎ.ಜಿ. ರೇಣುಕಾ

SDA

ಗ್ರಂಥಾಲಯವು ಚಂದಾ ಹೊಂದಿರುವ ನಿಯತಕಾಲಿಕೆಗಳ ಪಟ್ಟಿ