ವಿಷಯಾವಳಿ ನೀತಿ ನಿಯಮಗಳು

ಶುಲ್ಕ ವಿವರಗಳು :

 • ಪ್ರವೇಶಾತಿ ಸಂದರ್ಭಲ್ಲಿ ವಿದ್ಯಾರ್ಥಿಗಳು ಈ ಕೆಳಗಿನ ವಿಷಯಗಳಿಗೆ ವಿಶ್ವವಿದ್ಯಾಲಯವು ನಿಗದಿ ಪಡಿಸಿದ ರೀತಿಯಲ್ಲಿ ಶುಲ್ಕಗಳನ್ನು ತುಂಬಬೇಕಾಗಿರುತ್ತದೆ.-   ಪ್ರವೇಶ ಶುಲ್ಕ, ಆಂತರಿಕ ಮೌಲ್ಯಮಾಪನ ಪರೀಕ್ಷೆ, ಕ್ರೀಡೆ, ಗ್ರಂಥಾಲಯ, ವಾಚನಾಲಯ, ವಿದ್ಯಾರ್ಥಿ ಕ್ಷೇಮ, ಶಿಕ್ಷಕರ ಕ್ಷೇಮನಿಧಿ, ವೈದ್ಯಕೀಯ ನಿಧಿ, ಗುರುತಿನ ಚೀಟಿ, ಪ್ರಯೋಗಾಲಯ ಹಾಗೂ ಬೋಧನಾ ಶುಲ್ಕ.
 • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರ ವಿದ್ಯಾರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ಶುಲ್ಕ ವಿನಾಯಿತಿ ಇರುತ್ತದೆ.
 • ವಿದ್ಯಾರ್ಥಿಗಳು ತಮ್ಮ ಆದಾಯ ಪ್ರಮಾಣ ಪತ್ರ ಹಾಜರಿಪಡಿಸುವ ಮೂಲಕ ಬೋಧನಾ ಶುಲ್ಕದಲ್ಲಿ ಸರ್ಕಾರವು ನಿಗದಿ ಪಡಿಸಿದ ರೀತಿಯಲ್ಲಿ ಶುಲ್ಕ ವಿನಾಯಿತಿ ಪಡೆಯಬಹುದು.

ಸಾಮಾನ್ಯ: :

 • ವಿದ್ಯಾರ್ಥಿಗಳು ತಮ್ಮ ತಮ್ಮ ತರಗತಿಗಳು ಪ್ರಾರಂಭಗೊಳ್ಳುವ 5 ನಿಮಿಷ ಮುಂಚಿತವಾಗಿ ತರಗತಿ ಕೊಠಡಿಗಳಲ್ಲಿ ಹಾಜರಿರತಕ್ಕದ್ದು.
 • ಆಯಾ ವಿಷಯಕ್ಕೆ ಪ್ರತಿ ತರಗತಿಯಲ್ಲಿ ಹಾಜರಿ ಕರೆಯಲಾಗುತ್ತದೆ. ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ 75%ಕ್ಕಿಂತ ಕಡಿಮೆ ಹಾಜರಿಯನ್ನು ಪಡೆಯುವಂತಿಲ್ಲ. (ಕುವೆಂಪು ವಿವಿಯ ನಿಯಮಗಳನ್ನು ಗಮನಿಸಿ)
 • ಕಾಲೇಜಿನ ಮರುಪ್ರವೇಶದ ದಿನದಂದು ಹಾಜರಿ ಕಡ್ಡಾಯವಾಗಿರುತ್ತದೆ.
 • ವಿದ್ಯಾರ್ಥಿಗಳು ಟೆಸ್ಟ್ ಮತ್ತು ಪರೀಕ್ಷೆಗಳಿಗೆ ಕಡ್ಡಾಯವಾಗಿ ಹಾಜರಾಗತಕ್ಕದ್ದು.
 • ರಾಷ್ಟ್ರೀಯ ದಿನಾಚರಣೆಗಳು/ಹಬ್ಬಗಳಲ್ಲಿ ಕಾಲೇಜಿನಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲ್ಗೊಳ್ಳತಕ್ಕದ್ದು.
 • ಕಾಲೇಜಿನ ವಿವಿಧ ಸಂಘ/ಕ್ಲಬ್‌ಗಳು ಆಯೋಜಿಸುವ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸತಕ್ಕದ್ದು.
 • ತರಗತಿಗಳು ನಡೆಯದ ಸಮಯದಲ್ಲಿ ಗ್ರಂಥಾಲಯದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು.
 • ವಿದ್ಯಾರ್ಥಿಗಳು ಕಾಲೇಜಿಗೆ ಬರುವಾಗ ದೊಡ್ಡ ಮೊತ್ತದ ಹಣವನ್ನಾಗಲೀ, ಹೆಚ್ಚು ಬೆಲೆಯ ವಸ್ತುಗಳನ್ನಾಗಲೀ ತರಬಾರದು. ವಿದ್ಯಾರ್ಥಿಗಳು ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರಾಗಿರುತ್ತಾರೆ
 • ತರಗತಿ ನಡೆಯುವ ಅವಧಿಯಲ್ಲಿ ಅಧ್ಯಾಪಕರ ಅನುಮತಿಯಿಲ್ಲದೇ ಕಾಲೇಜಿನ ಆವರಣದಿಂದ ಹೊರ ಹೋಗುವಂತಿಲ್ಲ.
 • ಒಂದು ವೇಳೆ ಅನಾರೋಗ್ಯದ ಕಾರಣದಿಂದ ವಿದ್ಯಾರ್ಥಿ ಗೈರು ಹಾಜರಾದಲ್ಲಿ, ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರು ಪಡಿಸತಕ್ಕದ್ದು.
 • ವಿದ್ಯಾರ್ಥಿಯು ಆಂತರಿಕ ಪರೀಕ್ಷೆಗಳಿಗೆ ಆರೋಗ್ಯ ಸಮಸ್ಯೆಯಿಂದಾಗಿ ಹಾಜರಾಗಲು ಆಗದಿದ್ದಲ್ಲಿ (ಇತರೆ ಯಾವುದೇ ಕಾರಣಗಳಿಗೆ ಅವಕಾಶವಿಲ್ಲ) ವಿದ್ಯಾರ್ಥಿ ಅಥವಾ ಅವನ/ಅವಳ ಪೋಷಕರು ಪ್ರಿನ್ಸಿಪಾಲರಿಗೆ ಮೊದಲೇ ತಿಳಿಸತಕ್ಕದ್ದು.

ಶಿಸ್ತುಕ್ರಮ:

 • ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸತಕ್ಕದ್ದು. ಯಾವುದೇ ವಿದ್ಯಾರ್ಥಿಯ ನಡವಳಿಕೆಯಿಂದ ಕಾಲೇಜಿಗೆ ಕೆಟ್ಟ ಹೆಸರು ಬಂದ ಸಂದರ್ಭದಲ್ಲಿ ಆ ವಿದ್ಯಾರ್ಥಿಯನ್ನು ಅಮಾನತುಗೊಳಿಸುವ ಹಕ್ಕು ಕಾಲೇಜಿಗಿರುತ್ತದೆ.
 • ಕಾಲೇಜು ಕ್ಯಾಂಪಸ್ಸಿನಲ್ಲಿ ಮೊಬೈಲ್ ಫೋನಿನ ಬಳಕೆಯನ್ನು ನಿಷೇಧಿಸಲಾಗಿದೆ. ವಿದ್ಯಾರ್ಥಿಗಳ ಬಳಿ ಸೆಲ್‌ಫೋನ್ ಕಂಡು ಬಂದಲ್ಲಿ ಅದನ್ನು ವಶಪಡಿಸಿಕೊಳ್ಳಲಾಗುವುದು.
 • ಬೋಧಕ ವೃಂದೊಂದಿಗೆ ವ್ಯವಹರಿಸುವಾಗ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವರ್ತಿಸಬೇಕು.
 • ಕಾರಿಡಾರುಗಳಲ್ಲಿ ಅನಗತ್ಯ ಕಾಲಹರಣ ಮಾಡುವುದಕ್ಕೆ ಅವಕಾಶವಿಲ್ಲ.
 • ತರಗತಿಗೆ ಸರಿಯಾಗಿ ಹಾಜರಾಗದಿರುವುದು, ಬೋಧಕರೊಂದಿಗೆ ಅನುಚಿತವಾಗಿ ವರ್ತಿಸುವುದು, ತರಗತಿಯಲ್ಲಿ ಸರಿಯಾಗಿ ಪಾಠ ಕೇಳದಿರುವುದು, ತಡವಾಗಿ ಬರುವುದು, ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರುವುದು. ನಡೆ ಅಥವಾ ನುಡಿಯಲ್ಲಿ ಅಸಭ್ಯತನ ತೋರುವುದು ಮುಂತಾದುವು ವಿದ್ಯಾರ್ಥಿಯಲ್ಲಿ ಕಂಡು ಬಂದರೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ.
 • ದಂಡ ವಿಧಿಸುವ, ಅಮಾನತುಗೊಳಿಸುವ ಇಲ್ಲವೇ ಅಂತಹ ವಿದ್ಯಾರ್ಥಿಯ ಪ್ರವೇಶವನ್ನೇ ರದ್ದುಗೊಳಿಸಲಾಗುತ್ತದೆ
 • ಕಾಲೇಜಿನ ಆವರಣದ ಹೊರಗೆ ವಿದ್ಯಾರ್ಥಿಗಳು ತೋರುವ ಯಾವುದೇ ವರ್ತನೆಗೆ ಕಾಲೇಜು ಜವಾಬ್ದಾರಿಯಾಗಿರುವುದಿಲ್ಲ. ಆದರೆ, ಹಾಗೆ ಕಾಲೇಜಿನಿಂದ ಹೊರಗೆ ವಿದ್ಯಾರ್ಥಿಳು ಯಾವುದೇ ಅಪರಾಧ ಅಥವಾ ಕುಕೃತ್ಯ ನಡೆಸಿದ ಸಂದರ್ಭದಲ್ಲಿ ಅದರನ್ನು ಗಮನಿಸಿ ಪರಿಗಣನೆಗೆ ತೆಗೆದುಕೊಳ್ಳಲಾಗತ್ತದೆ.
 • ಕಾಲೇಜಿನ ಪ್ರಿನ್ಸಿಪಾಲರ ಅನುಮತಿಯಿಲ್ಲದೇ ನಿಧಿ ಸಂಗ್ರಹಿಸುವುದಾಗಲೀ, ಕಾರ್ಯಕ್ರಮಗಳನ್ನು ಆಯೋಜಿಸುವುದಾಗಲೀ, ಸಭೆಗಳನ್ನು ನಡೆಸುವುದಾಗಲೀ ಮಾಡುವಂತಿಲ್ಲ.
 • ತಂಬಾಕು, ಆಲ್ಕೊಹಾಲ್ ಅಥವಾ ಇನ್ನಾವುದೇ ಮಾದಕ ವಸ್ತುಗಳ ಬಳಕೆಯನ್ನು ಕಾಲೇಜು ಆವರಣದಲ್ಲಿ ನಿಷೇಧಿಸಲಾಗಿದೆ.
 • ಪ್ರಿನ್ಸಿಪಾಲರ ಸಮ್ಮತಿಯಿಲ್ಲದೇ ಯಾವುದೇ ಪುಸ್ತಕ, ಮ್ಯಾಗಜೀನ್, ದಿನ ಪತ್ರಿಕೆ ಮುಂತಾದುವುಗಳನ್ನು ಕಾಲೇಜಿನೊಳಗೆ ತರಲು ಅವಕಾಶವಿಲ್ಲ.
 • ದ್ವಿಚಕ್ರ ವಾಹನಗಳಲ್ಲಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ ಪತ್ರ) ಹೊಂದಿರಬೇಕು. ಮಿತಿ ಮೀರಿದ ಶಬ್ದ ಹಾಗೂ ಕಿರಿಕಿರಿ ತಪ್ಪಿಸುವುದಕ್ಕಾಗಿ ತಮ್ಮ ಗಾಡಿಗಳಿಗೆ ಸೈಲೆನ್ಸರ್‌ಗಳನ್ನು ಅಳವಡಿಸಿಕೊಂಡಿರಬೇಕು. ನಿಗದಿತ ಸ್ಥಳದಲ್ಲೇ ತಮ್ಮ ಗಾಡಿಗಳನ್ನು ನಿಲ್ಲಿಸಬೇಕು. ವಿದ್ಯಾರ್ಥಿಗಳ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಕಾಲೇಜು ಸ್ಥಳಾವಕಾಶ ಒದಗಿಸುವುದಿಲ್ಲ.
 • ಶೈಕ್ಷಣಿಕ ಪ್ರವಾಸಗಳು, ಕೈಗಾರಿಕಾ ಭೇಟಿ ಹಾಗೂ ಕ್ಷೇತ್ರ ಭೇಟಿಗಳನ್ನು ಪ್ರಿನ್ಸಿಪಾಲರ ಪೂರ್ವಾನುಮತಿಯೊಂದಿಗೆ ನಡೆಸಬೇಕು. ಅಂತಹ ಎಲ್ಲಾ ಸಂದರ್ಭಗಳಲ್ಲಿ ಲಿಖಿನ ಅನುಪಮತಿ ಪಡೆದುಕೊಂಡಿರಬೇಕು.
 • ವಿದ್ಯಾರ್ಥಿಗಳಿಗೆ ರಿಯಾಯಿತಿಗಳು, ವಿದ್ಯಾರ್ಥಿ ವೇತನಗಳು, ಉನ್ನತ ಶಿಕ್ಷಣ, ಉದ್ಯೋಗ ಹಾಗೂ ಪಠ್ಯೇತಚ ಚಟುವಟಿಕೆಗಳಲ್ಲಿ ಕಾಲೇಜನ್ನು ಪ್ರತಿನಿನಿಧಿಸುವ ಸಂದರ್ಭಗಳಲ್ಲಿ ತರಗತಿ ಮತ್ತು ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಹಾಜರಿ, ಅವರ ಪ್ರಗತಿ ಹಾಗೂ ನಡವಳಿಕೆಗಳನ್ನು ಪರಿಗಣಿಸಲಾಗುತ್ತದೆ..
 • ತರಗತಿ ಗಂಟೆಗಳ ನಂತರ ಯಾವುದೇ ಪ್ರೋಗ್ರಾಮ್ ಅಥವಾ ಕ್ರೀಡಾ / ಆಟಗಳು ಅಭ್ಯಾಸ ಇಲ್ಲದಿದ್ದರೆ ಯಾವುದೇ ವಿದ್ಯಾರ್ಥಿ ಕ್ಯಾಂಪಸ್ನಲ್ಲಿ ಉಳಿಯಲು ನಿರೀಕ್ಷಿಸಲಾಗುವುದಿಲ್ಲ.

ರ್‍ಯಾಗಿಂಗ್ ತಡೆ ಸಮಿತಿ:

 • ಕಾಲೇಜು ಕ್ಯಾಂಪಸ್ಸಿನಲ್ಲಿ ರ್‍ಯಾಗಿಂಗ್ ನಡೆಸುವುದನನು ನಿಷೇಧಿಸಲಾಗಿದೆ .
 • ರ್‍ಯಾಗಿಂಗ್ ಮೇಲೆ ನಿಗಾವಹಿಸಿ ಅದನ್ನು ತಡೆಯುವ ಉದ್ದೇಶದಿಂದ ಬೋಧಕವರ್ಗದ ಹಿರಿಯ ಸದಸ್ಯರನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ.
 • ರ್‍ಯಾಗಿಂಗ್ ಒಂದು ಶಿಕ್ಷಾರ್ಹ ಅಪರಾಧ ಎಂಬುದನ್ನು ವಿದ್ಯಾರ್ಥಿಗಳು ಗಮನಿಸಬೇಕು. ಅಲ್ಲದೇ ಸುಪ್ರೀಂ ಕೋರ್ಟಿನ ಆದೇಶ ಸಂಖ್ಯೆ ಎಸ್‌ಎಲ್‌ಪಿ (ಸಿ) ನಂ. 24295/2004ರ ಅನ್ವಯ ರ್‍ಯಾಗಿಂಗ್‌ನಲ್ಲಿ ತೊಡಗುವ ಅಥವಾ ಅದಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿಗಳನ್ನು ಕಾನೂನಿಗೆ ಒಪ್ಪಿಸಲಾಗುತ್ತದೆ.
 • ಕಿರುಕುಳ ನೀಡುವ (ಟೀಸಿಂಗ್), ಅಶ್ಲೀಲವಾಗಿ ನಿಂದಿಸುವ,  ಯಾವುದೇ ವಿದ್ಯಾರ್ಥಿ/ನಿಗೆ ಆತ/ಆಕೆ ಸಾಮಾನ್ಯವಾಗಿ ಮಾಡದ ಹಾಗೂ ಅದರಿಂದ ಅವನಿಗೆ/ಅವಳಿಗೆ ದೈಹಿಕ, ಮಾನಸಿಕ ಹಾನಿ ಉಂಟು ಮಾಡುವ ಯಾವುದೇ ಕೃತ್ಯವನ್ನು ಮಾಡಲು ಹೇಳುವುದೇ ರ್‍ಯಾಗಿಂಗ್ ಎನಿಸಿಕೊಳ್ಳುತ್ತದೆ.
 • ರ್‍ಯಾಗಿಂಗ್‌ನಲ್ಲಿ ತೊಡಗಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ.