ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಕುರಿತು

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಒಂದು ಪ್ರಥಮ ದರ್ಜೆ ಕಾಲೇಜಾಗಿದ್ದು ಜುಲೈ 1, 1966ರಂದು ಆರಂಭಗೊಂಡಿತು.clip_image002-copy-150x150 ಕಾಲೇಜು ಪ್ರಾರಂಭಗೊಂಡಾಗ ವಿಜ್ಞಾನದ ವಿಷಯಗಳನ್ನು ಮಾನವಿಕ ಶಾಸ್ತ್ರದ ಪಾರಂಪರಿಕ ವಿಷಯಗಳೊಂದಿಗೆ ಕಲಿಸಲಾಗುತ್ತಿತ್ತು. ನಂತರದಲ್ಲಿ ಸಮಾಜದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸುವ ಅಗತ್ಯವನ್ನು ಮನಗಂಡ ಕಾಲೇಜು ಆಡಳಿತ ಮಂಡಳಿಯು ಕ್ರಮೇಣವಾಗಿ ಅಗತ್ಯವನ್ನಾಧರಿಸಿ ಕೋರ್ಸುಗಳನ್ನು ಆರಂಭಿಸಿದೆ. ಈಗ ಕಾಲೇಜಿನಲ್ಲಿ ಬಿಕಾಂ ತರಗತಿಗಳನ್ನು ಇತರೆ ತರಗತಿಗಳೊಂದಿಗೆ (ಬಿಎ, ಬಿಎಸ್‌ಸಿ ಮತ್ತು ಬಿಸಿಎ) ನಡೆಸಲಾಗುತ್ತಿದೆ. ಹಿಂದೆ ನಮ್ಮ ಕಾಲೇಜು ಮೈಸೂರು ವಿಶ್ವವಿದ್ಯಾಲಯಕ್ಕೆ ಅಧೀನವಾಗಿತ್ತು. ಪ್ರಸ್ತುತ ಅದು ಕುವೆಂಪು ವಿಶ್ವವಿದ್ಯಾಲಯದ ಅಧೀನಕ್ಕೊಳಪಡುತ್ತದೆ.

ಪರಿಣಾಮವಾಗಿ, ಕಾಲೇಜು ತನ್ನ ಶಿಸ್ತುಬದ್ಧ ಕಾರ್ಯನಿರ್ವಹಣೆ ಮತ್ತು ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಗಳಿಂದಾಗಿ ಉತ್ತಮ ಹೆಸರು ಪಡೆದಿಕೊಂಡಿದೆ. ಕಾಲೇಜಿನ ಮೂಲಸೌಕರ್ಯಗಳು, ಕಲಿಕಾ ಸಂಪನ್ಮೂಲಗಳು ಮತ್ತು ಸಾಧನೆಗಳ ಆಧಾರದಲ್ಲಿ ನ್ಯಾಕ್ ಮಾನ್ಯತೆಯಲ್ಲಿ ಬಿ + ಶ್ರೇಣಿಯನ್ನು ಗಳಿಸಿದ್ದು ಒಟ್ಟಾರೆ ಗುಣಮಟ್ಟ ನಿರ್ವಹಣೆಯಲ್ಲಿ (ಟಿಕ್ಯೂಎಮ್) ಕರ್ನಾಟಕ ಸರ್ಕಾರದಿಂದ ಜಿಲ್ಲಾ ಮುಂಚೂಣಿ ಕಾಲೇಜು ಎಂದು ಗುರುತಿಸಲ್ಪಟ್ಟಿದೆ.

ಕಾಲೇಜು ಆರಂಭದಿಂದಲೂ ಹಲವು ರ್‍ಯಾಂಕ್‌ಗಳನ್ನು ಗಳಿಸುತ್ತಾ ಒಳ್ಳೆಯ ಹೆಸರು ಹೊಂದಿದ್ದು ಉತ್ಕೃಷ್ಟತೆಗೆ ಮತ್ತೊಂದು ಹೆಸರು ಡಿವಿಎಸ್ ಕಾಲೇಜು ಎಂದಾಗಿದೆ. ನಮ್ಮ ವಿದ್ಯಾರ್ಥಿಗಳು ಸಂಶೋಧನಾ ಸಂಸ್ಥೆಗಳಲ್ಲಿ ಮತ್ತು ಭಾರತದ ಮತ್ತು ವಿದೇಶಗಳ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆದಿದ್ದಾರೆ ಎಂಬುದು ಹೆಮ್ಮೆಯ ಸಂಗತಿ.

ಗುಣಮಟ್ಟದ ಶಿಕ್ಷಣ ನೀಡಲು ಹಾಗೂ ಒಳ್ಳೆಯ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲು ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಅನೇಕ ವಿಚಾರ ಸಂಕಿರಣಗಳು, ಕಮ್ಮಟಗಳು ಮತ್ತು ವಸ್ತುಪ್ರದಶರ್ಶನಗಳನ್ನು ಶಿಕ್ಷಕರಿಗಾಗಿಯೂ, ವಿದ್ಯಾರ್ಥಿಗಳಿಗಾಗಿಯೂ ಏರ್ಪಡಿಸುತ್ತಾ ಬರಲಾಗಿದೆ. ನಮ್ಮ ವಿದ್ಯಾರ್ಥಿಗಳ ರ್‍ಯಾಂಕ್ ವಿಜೇತರ ಪಟ್ಟಿಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಪ್ರತಿಫಲಿಸುತ್ತದೆ.

ನಮ್ಮ ಕಾಲೇಜು ಎರಡು ಎಕರೆಗಳ ಕ್ಯಾಂಪಸ್ ಆವರಣದಲ್ಲಿ ಸ್ಥಾಪನೆಯಾಗಿದೆ. ಕಾಲೇಜಿನಲ್ಲಿ ಅತ್ಯುತ್ತಮವಾದ ಗ್ರಂಥಾಲಯವಿದೆ. ಬಹುತೇಕ ವಿಭಾಗಗಳು ವಿಭಾಗವಾರು ಗ್ರಂಥಾಲಯಗಳನ್ನು ಹೊಂದಿವೆ. ತರಗತಿ ವೇಳೆಯಲ್ಲಿ ಕಾರ್ಯನಿರ್ವಹಿಸುವ ಆರೋಗ್ಯ ಕೇಂದ್ರವಿದ್ದು ಇಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿರಿಯ ವೈದ್ಯರು ಹಾಜರಿರುತ್ತಾರೆ.

ನಮ್ಮ ಸಂಸ್ಥೆಯಲ್ಲಿ ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಕಾರ್ಯಕ್ರಮಗಳು ಸಮುದಾಯಮುಖಿ ವಿಸ್ತೃತ ಚಟುವಟಿಕೆಗಳನ್ನು ಹಮ್ಮಿಕೊಂಡು ಅವುಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ಕಟು ವಾಸ್ತವಗಳೊಂದಿಗೆ ಮುಖಾಮುಖಿಯಾಗುತ್ತಾರೆ. ಸಮಗ್ರ ವ್ಯಕ್ತಿ ವಿಕಸನ ಕಾರ್ಯಕ್ರಮಗಳಲ್ಲಿ ಸಹಿಷ್ಣತೆ ಮತ್ತು ಒಗ್ಗಟ್ಟಿನ ಮೌಲ್ಯಗಳನ್ನು ಬೋಧಿಸುವ ಜೊತೆಗೆ ಅಂತಹ ಮೌಲ್ಯಗಳನ್ನು ಇಲ್ಲಿ ಆಚರಣೆಗೆ ತರಲಾಗುತ್ತದೆ. ಈ ಕ್ಷೇತ್ರದಲ್ಲಿ ನಮ್ಮ ಕೆಲವು ವಿದ್ಯಾರ್ಥಿಗಳು ಪ್ರಶಸ್ತಿ ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ