ರಾಷ್ಟ್ರೀಯ ಸೇವಾ ಯೋಜನೆ

ರಾಷ್ಟ್ರೀಯ ಸೇವಾ ಯೋಜನೆಯು ಜನತಾಂತ್ರಿಕವಾಗಿ ಬದುಕುವುದನ್ನು ಹಾಗೂ ಸ್ವ-ಸಹಾಯ ಸೇವೆಯ ಪ್ರಾಮುಖ್ಯತೆಯನ್ನು ತನ್ನ ಗುರಿಯಾಗಿಸಿಕೊಂಡಿದೆ. ’ನಾನು ಅಲ್ಲ, ನೀನು’ ಎಂಬುದು ಎನ್‌ಎಸ್‌ಎಸ್‌ನ ಧ್ಯೇಯವಾಕ್ಯ. ಎನ್‌ಎಸ್‌ಎಸ್‌ನ ಸಂಕೇತವು ಓರಿಸ್ಸಾದ ಕೋನಾರ್ಕ್‌ನಲ್ಲಿರುವ ಜಗತ್‌ಪ್ರಸಿದ್ಧ ಸೂರ್ಯ ದೇವಸ್ಥಾನದ  ಬೃಹತ್ ರಥದ ಕಲ್ಪನೆಯನ್ನಾಧರಿಸಿದೆ. ಚಕ್ರದಲ್ಲಿ ಎಂಟು ಗೆರೆಗಳು ಎನ್‌ಎಸ್‌ಎಸ್ ಸ್ವಯಂ ಸೇವಕರು ಜೀವಂತಿಕೆಯಿಂದ, ಸಕ್ರಿಯವಾಗಿ, ಶಕ್ತಿಯುತವಾಗಿ ಹಾಗೂ ಸ್ಪೂರ್ತಿಯುತವಾಗಿ ಕಳೆಯುವ ದಿನದ 24 ಗಂಟೆಗಳನ್ನು ಪ್ರತಿನಿಧಿಸುತ್ತವೆ.

        ನಮ್ಮ ಕಾಲೇಜು ಕುವೆಂಪು ವಿಶ್ವವಿದ್ಯಾಲಯಕ್ಕೆ ಅಧೀನವಾಗಿರುವ ಎರಡು ಎನ್‌ಎಸ್‌ಎಸ್ ಘಟಕಗಳನ್ನು ಹೊಂದಿದ್ದು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಹಾಗೂ ಬದುಕಿನ ಎಲ್ಲಾ ರಂಗಗಳಲ್ಲಿ ಸ್ವಸಹಾಯದ ಚಿಂತನೆಯನ್ನು ಬೆಳೆಸಲು ಸಹಾಯಕವಾಗಿದೆ.

ಎನ್‌ಎಸ್‌ಎಸ್‌ನ ಪ್ರಮುಖ ಧ್ಯೇಯಗಳು:

  • ನಾವು ಕೆಲಸ ಮಾಡುವ ಸಮುದಾಯವನ್ನು ಅರ್ಥ ಮಾಡಿಕೊಳ್ಳುವುದು
  • ಸಮುದಾಯದೊಂದಿಗಿನ ಸಂಬಂಧದಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು.
  • ಸಮುದಾಯದ ಅಗತ್ಯಗಳು ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು.
  • ಸಾಮಾಜಿಕ ಹಾಗೂ ನಾಗರಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳುವುದು.
  • ವೈಯಕ್ತಿಕ ಹಾಗೂ ಸಮುದಾಯದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವುದು .
  • ಸಮೂಹ ಜೀವನ ಮತ್ತು ಹೊಣೆಗಾರಿಕೆಯ ಹಂಚಿಕೆಯ ಗುಣಗಳನ್ನು ಬೆಳೆಸಿಕೊಳ್ಳುವುದು.
  • ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಮತ್ತು ಪ್ರಜಾತಾಂತ್ರಿಕ ಮೌಲ್ಯಗಳನ್ನು ಪಡೆದುಕೊಳ್ಳುವುದು.
  • ತುರ್ತುಪರಿಸ್ಥಿತಿ ಹಾಗೂ ರಾಷ್ಟ್ರೀಯ ವಿಕೋಪಗಳ ಸಂದರ್ಭಗಳಲ್ಲಿ ಸ್ಪಂಧಿಸಲು ಬೇಕಾದ ಸಾಮರ್ಥ್ಯ ಬೆಳೆಸಿಕೊಳ್ಳುವುದು.
  • ರಾಷ್ಟ್ರೀಯ ಸಮಗ್ರತೆ ಹಾಗೂ ಸಾಮಾಜಿಕ ಸೌಹಾರ್ದತೆಯ ತಿಳುವಳಿಕೆಯ ಪಾಲನೆ ಎನ್‌ಎಸ್‌ಎಸ್ ಆಧಿಕಾರಿಗಳು        .

ಎನ್‌ಎಸ್‌ಎಸ್‌ ಅಧಿಕಾರಿ

1] ಡಾ.ಎ. ಟಿ. ಪದ್ಮೆ ಗೌಡ.

 2]ಟಿ.ಆರ್. ಗೋಪಾಲ್.

ಎನ್‌ಎಸ್‌ಎಸ್ ಫೋಟೋಗಳು :

KPICASA_GALLERY(Nss Photos)

 Picture 1 :  Dvs College of Arts & Science , Shimoga Princiapl B M Hosur and  Nss Officer Padme Gowda receiving the State-Level Best NSS unit award From Governor H R Bharadwaj in a Programme held in Bangalore .

 Picture 2 :District Level Best NSS Officer award 2007-2008 to Prof.A.T.Padme Gowda, NSS Officer. Dvs College of Arts and Science, Shimoga. Felicitated by by Prof. Sherigar, Vice Chancellor, Kuvempu  University & Prof. T.Gangadharaiah , Joint Director  Collegiate Education, Prof. Rangaraju Vanadurga, Co-ordinator, NSS, Kuvempu university Date 13-01-2009