ಶೈಕ್ಷಣಿಕ ವಿಭಾಗ

ಬೋಧಿಸುವ ಕೋರ್ಸುಗಳು

ನಮ್ಮ ಕಾಲೇಜಿನಲ್ಲಿ ನಾಲ್ಕು ಅಂತರ್‌ ಶಿಸ್ತೀಯ ಕೋರ್ಸುಗಳನ್ನು ಬೊಧಿಸಲಾಗುತ್ತಿದೆ. ಬಿಎ, ಬಿಎಸ್‌ಸಿ, ಬಿಸಿಎ ಮತ್ತು ಬಿಕಾಂ ಗಳಲ್ಲದೇ ಮೂಲ ವಿಜ್ಞಾನ ಹಾಗೂ ಅನ್ವಯಿಕ ವಿಜ್ಞಾನಗಳ ಹಲವು ಕಾಂಬಿನೇಶನ್‌ಗಳನ್ನು ನಡೆಸಲಾಗುತ್ತಿದೆ. ಕಳೆದ ಏಳು ವರ್ಷಗಳಲ್ಲಿ ಹೊಸದಾದ ಮೂರು ಕಾಂಬಿನೇಶನ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವು ವಿದ್ಯಾರ್ಥಿಗಳನ್ನು ಜಾಗತಿಕರಣದ ಸವಾಲುಗಳಿಗೆ ಸಂಸಿದ್ಧಗೊಳಿಸುವ ನಿಟ್ಟಿನಲ್ಲಿ ಅಳವಡಿಸಲಾದ ವಿಷಯಾವಳಿಗಳು. ನಮ್ಮ ಕಾಲೇಜಿನಲ್ಲಿ ಬೋಧಿಸುವ ಅಂತರ್-ಶಿಸ್ತೀಯ ಕೋರ್ಸುಗಳು ಇಂತಿವೆ.

ಭಾಷೆಗಳು : ಇಂಗ್ಲಿಷ್/ಕನ್ನಡ/ಹಿಂದಿ/ಸಂಸ್ಕೃತ/ಉರ್ದು

ಬಿಎಸ್ಸಿ ವಿಷಯಾವಳಿಗಳು

ಕಾಂಬಿನೇಶನ್‌ಗಳು ಭೌತ ಶಾಸ್ತ್ರದ ವಿಷಯಾವಳಿಗಳು :

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ( P.C.M )

ಭೌತಶಾಸ್ತ್ರ, ಗಣಿತ ಶಾಸ್ತ್ರ, ಎಲೆಕ್ಟ್ರಾನಿಕ್ಸ್ ( P.M.E )

ಭೌತಶಾಸ್ತ್ರ, ಗಣಿತ ಶಾಸ್ತ್ರ, ಕಂಪ್ಯೂಟರ್ ಸೈನ್ಸ್ ( P.M.Cs )

ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ( C.B.Z )

ಜೀವ ವಿಜ್ಞಾನದ ಕಾಂಬಿನೇಶನ್‌ಗಳು :

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ( P.C.M )

ಬಿ.ಎ ಕಾಂಬಿನೇಶನ್‌ಗಳು

ಇಂಗ್ಲಿಷ್ ಮಾಧ್ಯಮ :

ಇತಿಹಾಸ, ಅರ್ಥಶಾಸ್ತ್ರ್ರ, ರಾಜ್ಯ ಶಾಸ್ತ್ರ ( H.E.P )

ಇತಿಹಾಸ, ಸಮಾಜಶಾಸ್ತ್ರ್ರ, ರಾಜ್ಯಶಾಸ್ತ್ರ ( H.S.P )

ಇತಿಹಾಸ, ಅರ್ಥಶಾಸ್ತ್ರ, ಇಂಗ್ಲಿಷ್ ( H.E.E )

ಕನ್ನಡ ಮಾಧ್ಯಮ  :

ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ( H.E.P )

ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ( H.S.P )

ಇತಿಹಾಸ, ಅರ್ಥಶಾಸ್ತ್ರ, ಕನ್ನಡ ( H.E.K )

ಇತಿಹಾಸ, ಸಮಾಜಶಾಸ್ತ್ರ, ಕನ್ನಡ ( H.S.K)

ಬಿಸಿಎ (ಕಂಪ್ಯೂಟರ್ ಅಪ್ಲಿಕೇಶನ್ಸ್)

ಸೂಚನೆ: ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ ಪರಿಸರ ವಿಜ್ಞಾನ ಮತ್ತು ಭಾರತದ ಸಂವಿಧಾನ ವಿಷಯಗಳು ಎಲ್ಲಾ ಪದವಿ ತರಗತಿಗಳಿ ಕಡ್ಡಾಯವಾಗಿರುತ್ತವೆ.

ಸರ್ಟಿಫಿಕೇಟ್ ಕೋರ್ಸುಗಳು ಹಾಗೂ ಆಡ್-ಆನ್ ಕೋರ್ಸುಗಳು:

ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಹಲವು ಆಡ್-ಆನ್ ಕೋರ್ಸುಗಳು ಮತ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಅಂತಹ ಕೋರ್ಸುಗಳೆಂದರೆ,

* ಇಂಟರ್ನೆಟ್ ಅವೇರ್‌ನೆಸ್ ಪ್ರೋಗ್ರಾಂ

* ಬೇಸಿಕ್ ಕಂಪ್ಯೂಟರ್ ಪ್ರೋಗ್ರಾಂ

* ಟೀವಿ ಮತ್ತು ರೇಡಿಯೋ ರಿಪೇರಿ ಕೋರ್ಸ್

* ಹಲವು ಸರ್ಟಿಫಿಕೇಟ್ ಕೋರ್ಸುಗಳನ್ನು ಮತ್ತು ಪದವಿ ತರಗಳಿಗೆ ಪ್ರವೇಶ ಒದಗಿಸುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಕೇಂದ್ರವನ್ನು ನಮ್ಮ ಕಾಲೇಜು ಹೊಂದಿದೆ.