ಹಳೆಯ ವಿದ್ಯಾರ್ಥಿಗಳ ಸಂಘ

ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವು 2004ರಲ್ಲಿ ನೋಂದಾವಣೆ ಹೊಂದಿದ್ದು ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಮತ್ತು ನಿರ್ದೇಶಕರನ್ನು ಹೊಂದಿದೆ

ಸಂಸ್ಥೆಯ ಒಳಿತಿಗಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಈ ಸಂಘದ ಪ್ರಮುಖ ಉದ್ದೇಶವಾಗಿದೆ. ಕಾಲೇಜಿನಲ್ಲಿ ಶಿಕ್ಷಣ ಪಡೆದು ಜೀವನದಲ್ಲಿ ಉತ್ತಮ ಸಾಧನೆಗೈದವರನ್ನು ಶೋಧಿಸುವುದು ಮತ್ತು ಸಂಸ್ಥೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಅಂಥವರ ಸಲಹೆ ಸಹಕಾರ ಪಡೆಯುವುದು

ಸಂಘದ ಪ್ರಮುಖ ಧ್ಯೇಯಗಳು 

  • ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಜೀವನದ ಇತರ ರಂಗಗಳಾದ ಸಂಗೀತ, ನಾಟಕ ಮತ್ತಿತರ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಳಿಗೆ ಅವರನ್ನು ಗೌರವಿಸಿ, ಸನ್ಮಾನಿಸುವುದು.
  • ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳಿಂದ ದೇಣಿಗೆ ಸಂಗ್ರಹಿಸುವುದು.
  • ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರನ್ನು ಮತ್ತು ಆಯಾ ಶೈಕ್ಷಣಿಕ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸೇರಿಸಿ ವರ್ಷಕ್ಕೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವುದು.
  • ಹಳೆಯ ವಿದ್ಯಾರ್ಥಿಗಳ ಪೋಷಕರನ್ನೂ ಸೇರಿಸಿಕೊಂಡು ನಮ್ಮ ಸಂಸ್ಥೆಯು ಅವರಿಗೂ ಸೇರಿದ್ದು ಎಂಬ ಭಾವನೆ ಬೆಳೆಸುವುದು.
  • ಕಾಲೇಜಿನ ಎಲ್ಲಾ ಚಟುವಟಿಕೆಗಳಲ್ಲಿ ಅವರು ಭಾಗವಹಿಸುವ ನಿಟ್ಟಿನಲ್ಲಿ ಅವರನ್ನೂ ಹಳೆಯ ವಿದ್ಯಾರ್ಥಿ ಸಂಘದ ಸದಸ್ಯರಾಗಿ ಒಳಗೊಳ್ಳುವುದು.

ಸಂಘವನ್ನು ಕರ್ನಾಟಕ ನೋಂದಾವಣೆ ಕಾಯಿದೆ 1960ರ ಅಡಿಯಲ್ಲಿ ನೋಂದಾವಣೆ ಮಾಡಿಲಾಗಿದೆ. ನೋಂದಾವಣೆ ಸಂಖ್ಯೆ 156:NOR:SMJ:2004-2005. 100/- ರೂಪಾಯಿ ನೀಡುವ ಮೂಲಕ ಸಂಘದ ಸದಸ್ಯರಾಗುತ್ತಾರೆ. 1000 ರೂಪಾಯಿ ನೀಡುವವರು ಸಂಘದ ಆಜೀವ ಸದಸ್ಯರಾಗುತ್ತಾರೆ. ಸದಸ್ಯರಾಗಲು ಬಯಸುವವರು ತಮ್ಮ ಡಿಡಿಗಳನ್ನು ಕಳಿಸಬಹುದು:

ಕಾರ್ಯದರ್ಶಿಗಳು , 

ಅಕೌಂಟ್ ನಂಬರ್ : 718993469,

ಇಂಡಿಯನ್ ಬ್ಯಾಂಕ್, ಶಿವಮೊಗ್ಗ – 577201,

ಕರ್ನಾಟಕ ರಾಜ್ಯ .