ಮುನ್ನೋಟ ಮತ್ತು ಧ್ಯೇಯ

ನಿರಂತರತೆ, ಕಲಿಕೆ, ಪರಿವರ್ತನೆ 1966ರಿಂದ

ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು, ಶಿವಮೊಗ್ಗ, ಒಂದು ಪ್ರಥಮ ದರ್ಜೆ ಕಾಲೇಜಾಗಿದ್ದು ಜುಲೈ 1, 1966ರಂದು ಆರಂಭಗೊಂಡಿತು. ಮಲೆನಾಡು ಪ್ರದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟ ಸಂಸ್ಥೆಯಾಗಿರುವ ಇದು 50 ಸಂವತ್ಸರಗಳ ಮೈಲಿಗಲ್ಲನ್ನು ತಲುಪಿದೆ.

ಮುನ್ನೋಟ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಯತ್ನಿಸುವ ಜೊತೆಗೆ, ಮನುಕುಲದ ಸೇವೆಗಾಗಿ ಮಾನವ ಸಾಮರ್ಥ್ಯದ ಸಮಗ್ರ ಬೆಳವಣಿಗೆಯನ್ನು ಸಾಧಿಸಲು ಮೌಲ್ಯಾಧಾರಿತ, ವೃತ್ತಿ ಉದ್ದೇಶಿತ ಶಿಕ್ಷಣ ನೀಡುವುದು.

ಧ್ಯೇಯ

ಕೆಳಕಂಡ ಅಂಶಗಳ ಮೂಲಕ ಮುನ್ನೋಟವನ್ನು ಸಾಕಾರಗೊಳಿಸುವುದು

    1. ಶಾಸನಾತ್ಮಕ ಹಾಗೂ ವಿಧಿಬದ್ಧ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಪ್ರೋತ್ಸಾಹಿಸುವುದು.
    2. ಅಗತ್ಯ ಮೂಲಸೌಕರ್ಯ ಮತ್ತು ಕಲಿಕಾ ಸಂಪನ್ಮೂಲಗಳ ಯೋಜನೆ ಹಾಗೂ ಸ್ಥಾಪನೆ.
    3. ಬೋಧಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉತ್ತೇಜನ ಮತ್ತು ಶಿಕ್ಷಣ ಕಾರ್ಯಕ್ರಮಗನ್ನು ಮುಂದುವರೆಸುವುದು.
    4. ಅರ್ಥರ್ಪೂರ್ಣ ಸಂಶೋಧನಾ ಚಟುವಟಿಕೆಗಳನ್ನು ಆರಂಭಿಸಿ ಮುಂದುವರೆಸಿಕೊಂಡು ಹೋಗುವುದು.
    5. ಸಂಸ್ಥೆ – ಕೈಗಾರಿಕೆ ಸಂವಹನ ಹಾಗೂ ಸಹಭಾಗಿತ್ವವನ್ನು ಎಲ್ಲಾ ಹಂತಗಳಲ್ಲಿ ಉತ್ತೇಜಿಸುವುದು.
    6. ಸಂಸ್ಥೆಯ ಎಲ್ಲಾ ಸದಸ್ಯರ ನಡುವೆ ಸೌಹಾರ್ದಯುತ ಹಾಗೂ ಪರಸ್ಪರ ಗೌರವದ ಸಂಬಂಧಗಳನ್ನು ಖಾತ್ರಿಪಡಿಸುವುದು .