ಡಿವಿಎಸ್‌ನ ಧ್ಯೇಯವಾಕ್ಯ

ಹೊಂದಿಕೆ ಮತ್ತು ಉತ್ಕೃಷ್ಟತೆ

ಸಂಸ್ಥೆಯು ಬದಲಾಗತ್ತಿರುವ ಕಾಲಕ್ಕೆ ಹೊಂದಿಕೊಳ್ಳುವುದೇ ಅಲ್ಲದೇ ಶಿಕ್ಷಣದ ಎಲ್ಲಾ ವಿಷಯಗಳಲ್ಲಿ ಉತ್ಕೃಷ್ಟತೆ ಸಾಧಿಸಲು ಪ್ರಯತ್ನಿಸುತ್ತದೆ.

clip_image002-copy-150x150

ಸಂಸ್ಥೆಯ ಮುನ್ನೋಟ ಮತ್ತು ಧ್ಯೇಯಗಳನ್ನು ಗಮನಲ್ಲಿಟ್ಟುಕೊಂಡು ಸಂಸ್ಥೆಯ ಲೋಗೋ ಸಿದ್ಧಪಡಿಸಲಾಗಿದೆ. ಇದು ಪ್ರಾಚೀನ ಭಾರತದ ವಿದ್ವಾಂಸರು ಶಿಕ್ಷಣದ ಕುರಿತು ವ್ಯಕ್ತಪಡಿಸಿದ್ದ ಆಶಯಗಳನ್ನೂ ಪ್ರತಿಫಲಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಗುರುವೇ ಪ್ರಮುಖ ಪಾತ್ರ ವಹಿಸುವುದರಿಂದ ಇಲ್ಲಿ ಗುರುವನ್ನು ಕೇಂದ್ರಸ್ಥಾನದಲ್ಲಿ ಇರಿಸಲಾಗಿದೆ. ಗುರುವಿನ ಸುತ್ತಲೂ ಇರುವ ಕಿರಣಗಳು ಬುದ್ಧಿ ಹಾಗೂ ಜ್ಞಾನೋದಯವನ್ನು ಸಂಕೇತಿಸುತ್ತವೆ. ಗುರುವಿನ ಎದುರಿಗಿರುವ ವ್ಯಾಸ ಪೀಠವು ಸಂಸ್ಥೆಯು ಪಸರಿಸುವ ಜ್ಞಾನದ ಸಂಕೇತವಾಗಿದೆ. ಲೋಗೋ ಇರುವ ವೃತ್ತಾಕಾರವು ಪೂರ್ಣತೆ, ಸಮಗ್ರತೆ ಹಾಗೂ ನಿಖರತೆಯನ್ನು ಪ್ರತಿಫಲಿಸುತ್ತದೆ. ಇಕ್ಕೆಲಗಳಲ್ಲಿರುವ ಹಂಸಗಳು ವಿಚಾರ ಹಾಗೂ ವಿವೇಕಕ್ಕೆ ಸಂಕೇತಗಳಾಗಿವೆ. ಮೇಲಕ್ಕೇಳುತ್ತಿರುವ ಹಂಸಗಳು ಜೀವನವು ಕೆಳ ಮಟ್ಟದಿಂದ ಮೇಲಕ್ಕೆ ಉನ್ನತೀಕರಿಸುವುದನ್ನು ಸಂಕೇತಿಸುತ್ತವೆ. ಈ ಲೋಗೋದಲ್ಲಿ ನಮ್ಮ ಸಂಸ್ಥೆಯ ಗುರಿಯನ್ನು ತಿಳಿಸುತ್ತದೆ. ಈ ನಿಟ್ಟಿನಲ್ಲಿ ಈ ಲೋಗೋವನ್ನು ಸಂಸ್ಥೆಯ ಧ್ಯೇಯ ಗುರಿ ಆಶಯಗಳೊಂದಿಗೆ ಹೊಂದಿಕೆಯಾಗುವಂತೆ ರಚಿಸಲಾಗಿದೆ.

|| ಪಂಡಿತಾ: ಸಮದರ್ಶಿನಃ||

ವಿವರಣೆ: “ಶಿಕ್ಷಣ ಪಡೆದ ವ್ಯಕ್ತಿ ಜೀವನದ ಕುರಿತು ಜೀವನ ಕುರಿತ ಸಮಗ್ರ ದೃಷ್ಟಿ ಹೊಂದಿರುತ್ತಾನೆ”.