• .
  • .
  • .
  • .
  • .
  • .
  • .
  • .

 

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸ್ವಾಗತ

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಒಂದು ಪ್ರಥಮ ದರ್ಜೆ ಕಾಲೇಜಾಗಿದ್ದು ಜುಲೈ 1, 1966ರಂದು ಆರಂಭಗೊಂಡಿತು. ಕಾಲೇಜು ಪ್ರಾರಂಭಗೊಂಡಾಗ ವಿಜ್ಞಾನದ ವಿಷಯಗಳನ್ನು ಮಾನವಿಕ ಶಾಸ್ತ್ರದ ಪಾರಂಪರಿಕ ವಿಷಯಗಳೊಂದಿಗೆ ಕಲಿಸಲಾಗುತ್ತಿತ್ತು. ನಂತರದಲ್ಲಿ ಸಮಾಜದಲ್ಲಿ ಉಂಟಾಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸುವ ಅಗತ್ಯವನ್ನು ಮನಗಂಡ ಕಾಲೇಜು ಆಡಳಿತ ಮಂಡಳಿಯು ಕ್ರಮೇಣವಾಗಿ ಅಗತ್ಯವನ್ನಾಧರಿಸಿ ಕೋರ್ಸುಗಳನ್ನು ಆರಂಭಿಸಿದೆ. ಈಗ ಕಾಲೇಜಿನಲ್ಲಿ ಬಿಕಾಂ ತರಗತಿಗಳನ್ನು ಇತರೆ ತರಗತಿಗಳೊಂದಿಗೆ (ಬಿಎ, ಬಿಎಸ್‌ಸಿ ಮತ್ತು ಬಿಸಿಎ) ನಡೆಸಲಾಗುತ್ತಿದೆ. ಹಿಂದೆ ನಮ್ಮ ಕಾಲೇಜು ಮೈಸೂರು ವಿಶ್ವವಿದ್ಯಾಲಯಕ್ಕೆ ಅಧೀನವಾಗಿತ್ತು. ಪ್ರಸ್ತುತ ಅದು ಕುವೆಂಪು ವಿಶ್ವವಿದ್ಯಾಲಯದ ಅಧೀನಕ್ಕೊಳಪಡುತ್ತದೆ.